ಶಿಕ್ಷಣ ಮತ್ತು ಶಿಕ್ಷಕ ಈ ಎರಡು ಪದಗಳನ್ನು ಒಮ್ಮೆ ಗಮನಿಸಿ, ಇಲ್ಲಿ ತಕ್ಷಣಕ್ಕೆ ನೆನಪಿಗೆ ಬರುವುದು ತಾಯಿ, ಏಕೆಂದರೆ ಮನೆಯೆ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವ ನುಡಿಯಂತೆ ಮೊದಲು ಮಗು ಕಲಿಕೆಯನ್ನು ಪ್ರಾರಂಭಿಸುವುದು ಮನೆಯಲ್ಲಿ ಅಂದರೆ ತನ್ನ ತಾಯಿಯ ಹತ್ತಿರ ಮಗು ತೊದಲು ನುಡಿಗಳ ಮೂಲಕ ಮಾತನಾಡುವುದನ್ನು ಕಲಿಯುತ್ತದೆ. ಮಗುವಿಗೆ ತಾಯಿ ಹೇಗೆ ತಿಳಿಸುವಳೋ ಹಾಗೇ ಅದು ಕಲಿಯುತ್ತಾ ಹೋಗುತ್ತದೆ. ಮಗುವಿಗೆ ತುಂಬಾ ಹತ್ತಿರದ ಹಾಗೂ ಅತ್ಯಂತ ಪ್ರೀತಿಪಾತ್ರರಾಗಿರುವವರು ಎಂದರೆ ಅದು ತಾಯಿ. ಏಕೆಂದರೆ ಬಾಲ್ಯದಲ್ಲಿ ಮಗುವಿನ ತುಂಟಾಗಳನ್ನೆಲ್ಲ ನೋಡುತ್ತಾ ಅರದ ಪ್ರತಿಯೊಂದು ನೋವು ನಲಿವುಗಳಲ್ಲಿ ಸದಾ ಜೊತೆಗಿರುವವಳೇ ತಾಯಿ.
ತಾಯಿಯಿಂದ ಮಾತನಾಡುವುದನ್ನು ಕಲಿತ ಮಗು ಮೊದಲಿಗೆ ಅಪ್ಪ-ಅಮ್ಮ, ತಾತ- ಅಜ್ಜಿ, ಅಣ್ಣ-ಅಕ್ಕ ಹೀಗೆ ಸಂಬಂಧಗಳನ್ನು ಗುರುತಿಸುತ್ತಾ ತನ್ನವರನ್ನೆಲ್ಲಾ ಅದು ನೆನಪಿನಲ್ಲಿಟ್ಟು ಕೊಳ್ಳುತ್ತದೆ. ಇಷ್ಟೇ ಸಾಕೇ ಮಗುವಿಗೆ ಇತರೇ ವಿಷಯಗಳ ಬಗ್ಗೆ ತಿಳಿಯುವುದು ಬೇಡವೇ ಅದು ಸಮಾಜದಲ್ಲಿ ಜೀವನವನ್ನು ನಿರ್ವಹಿಸಬೇಕಲ್ಲಾ ಅದಕ್ಕಾಗಿ ಶಾಲೆ ಎನ್ನುವ ಎಂದು ಚೌಕಟ್ಟಿನೊಳಗೆ ಮಗುವಿಗೆ ಪ್ರಪಂಚದ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಹಾಗಾದರೆ ಶಾಲೆಯನ್ನೇನೋ ಪ್ರಾರಂಭಿಸಿದೆವು ಮಗುವು ಶಾಲೆಗೆ ಬರಲು ಸಿದ್ದವಾಗಿದೆ ಇಲ್ಲಿ ಶಾಲೆಯಲ್ಲಿ ಮಗುವಿಗೆ ವಿಷಯಗಳ ಬಗ್ಗೆ ತಿಳಿಸಲು ಒಬ್ಬ ವ್ಯಕ್ತಿಯ ಅಗತ್ಯವಿದೆಯಲ್ಲಾ ಎಂದು ಯೋಚಿಸಿದಾಗ ಆಗ ನಮ್ಮ ಕಣ್ಣೆದುರಿಗೆ ಬರುವವರೇ ಶಿಕ್ಷಕರು,ಶಿಕ್ಷಕರು ಮಗುವಿಗೆ ಪ್ರಾಪಂಚಿಕ ವಿಷಯಗಳನ್ನು ಅಷ್ಟೇ ಅಲ್ಲ ಲೌಕಿಕ ಹಾಗೂ ತನ್ನ ಬಗ್ಗೆ ತಾನು ಅರಿಯಲು ಇರುವ ಮಾರ್ಗಗಳನ್ನು ಕಥೆಗಳ ಮೂಲಕ, ಹಾಡುಗಳ ಮೂಲಕ ಹಾಗೂ ಅಭಿನಯದ ಮೂಲಕ ತಿಳಿಸುವ ಪ್ರಯತ್ನಮಾಡುತ್ತಾನೆ ಅದರಂತೆ ಮಗುವು ಕಲಿಯುತ್ತಾ ಹೋಗುತ್ತದೆ.
ಮಗುವಿಗೆ ಶಿಕ್ಷಣ ನೀಡುವಲ್ಲಿ ಮತ್ತು ಶಿಕ್ಷಕರ ಪಾತ್ರ
ತಾಯಿ ಮನೆಯಲ್ಲಿ ಮಗುವಿಗೆ ಪ್ರೀತಿ, ವಾತ್ಸಲ್ಯ, ಮಮತೆಯಿಂದ ಶಿಕ್ಷಣವನ್ನು ನೀಡಿದಂತೆ ಶಿಕ್ಷಕರೂ ಅಷ್ಟೇ ಆಸಕ್ತಿವಹಿಸಿ ಮಗುವಿಗೆ ವಿಷಯಗಳ ಪರಿಚಯವನ್ನು ಮಾಡಿಕೊಡಬೇಕು. ಶಿಕ್ಷಕ ಒಂದು ತಪ್ಪು ಮಾಡಿದರೆ ಮಗು ನೂರು ತಪ್ಪು ಮಾಡುತ್ತದೆ. ಅದಕ್ಕೇ ಹೇಳುವುದು ಶಿಕ್ಷಕರಾದವರ ಮೊದಲ ಕರ್ತವ್ಯವೇನೆಂದರೆ ವಿಷಯಗಳ ಬಗ್ಗೆ ಸೂಕ್ತಜ್ಞಾನವನ್ನು ಹೊಂದಿರಬೇಕು ಹಾಗೂ ತರಗತಿಯ ಅವಶ್ಯಕತೆಗೆ ಹಾಗೂ ಮಗುವಿನ ಆಸಕ್ತಿಗೆ ಪೂರಕವಾಗಿ ಶಿಕ್ಷಣವನ್ನು ನೀಡುವ ಪ್ರಯತ್ನವನ್ನು ಮಾಡಬೇಕು
ಮಗು ಮತ್ತು ಶಿಕ್ಷಕರ ಸಂಬಂಧ
ತರಗತಿಯಲ್ಲಿ ಶಿಕ್ಷಕರು ಹಾಗೂ ಮಗುವಿನೊಂದಿಗಿನ ಸಂಬಂಧ ಹೇಗಿರಬೇಕೆಂದರೆ
* ಮಗುವಿನ ಆಸಕ್ತಿ ಅಭಿರುಚಿಗೆ ತಕ್ಕಂತೆ ಹೊಂದಿಕೊಳ್ಳಬೇಕು
* ಮಗುವಿನ ಕಲಿಕೆಗೆ ಪೂರಕವಾತಾವರಣ ಸೃಷ್ಟಿಸಬೇಕು
* ಮಗುವಿನ ಬೌದ್ದಿಕ ಮಟ್ಟಕ್ಕೆ ತಕ್ಕಂತೆ ವಿಷಯಗಳನ್ನು ತಿಳಿಸಬೇಕು
* ಮಗುವಿಗೆ ಯಾವುದೇ ಮಾನಸಿಕ ಹಿಂಸೆಯಾಗದಂತೆ ಶಿಕ್ಷಣ ನೀಡಬೇಕು
* ತಾಯಿ ಹೇಗೆ ಮಗುವನ್ನು ನೋಡಿಕೊಳ್ಳುವಳೋ ಹಾಗೇ ಶಿಕ್ಷಕರೂ ಮಗುವನ್ನು ಪ್ರೀತಿಯಿಂದ ಾತ್ಮೀಯತೆಯಿಂದ ನೋಡಿಕೊಳ್ಳಬೇಕು
ಒಟ್ಟಾರೆಯಾಗಿ ಶಿಕ್ಷಕರು ತರಗತಿಯಲ್ಲಿ ಮಕ್ಕಳನ್ನು ಶಾಂತಿಯಿಂದ ಹಾಗೂ ಪಠ್ಯವಿಷಯಗಲಲ್ಲಿ ಆಸಕ್ತಿಯಿಂದ ಕಲಿಯುವಿಕೆಗೆ ಪ್ರೇರೇಪಿಸಬೇಕೆ ಹೊರತು ಅವರು ಸಾಕಪ್ಪಾ ಈ ಶಾಲೆಯ ಸಹವಾಸ ೆಂದು ತರಗತಿ ಬಿಟ್ಟು ಹೋಗುವಂತಿರಬಾರದು. ಹಾಗೂ ಶಿಕ್ಷಕರು ಸಹನಾ ಮೂರ್ತಿಯೂ, ತ್ಯಾಗಶೀಲ ಮನೋಭಾವದವರೂ ಆಗಿರಬೇಕು ಏಕೆಂದರೆ ಮಕ್ಕಳು ತುಂಟಾಟ ಆಡುವುದು ಸಹಜ ಆದರೆ ಅವರ ಈ ಹುಡುಗಾಟಿಕೆ ಸ್ವಭಾವಕ್ಕೆ ಶಿಕ್ಷಕರು ಕೋಪಿಸಿಕೊಳ್ಳಬಾರದು ಕೆಲವೊಂದು ವಿಚಾರಗಳಿಗೆ ಕೋಪಿಸಿಕೊಂಡಂತೆ ಇದ್ದರೆ ಮತ್ತೆ ಶಾಂತತೆಯಿಂದ ಸಮಾಧಾನ ಪಡಿಸುವ ಮೂಲಕ ಎಲ್ಲರ ಮನಸ್ಸನ್ನೂ ಕೇಂದ್ರೀಕರಿಸಿಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ