ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಏಪ್ರಿಲ್ 10, 2017

ಪತ್ರಿಕಾ ಪ್ರಕಟಣೆಗಳು





ವಸಂತೋತ್ಸವದ ಮಧುರ ಕ್ಷಣಗಳು

 ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಕೆ.ಬಿ. ಬಡಾವಣೆ, ಕೋಟೆರಸ್ತೆ, ಚಿತ್ರದುರ್ಗ

ಮದಕರಿನಾಯಕರು ಆಳಿದ ನಾಡು ಕನ್ನಡಿಗರ ಹೆಮ್ಮೆಯ ಬೀಡು ಹಾಗೂ ಸಾಹಿತಿಗಳ ನೆಲೆವೀಡು ಎಂದೇ ಪ್ರಖ್ಯಾತಿ ಹೊಂದಿರುವ ಕೋಟೆ ನಾಡಿನಲ್ಲಿ, ಬಿ.ಇಡಿ ಶಿಕ್ಷಕರ ತರಬೇತಿಯನ್ನು 2009ರಿಂದ ನೀಡುತ್ತಾ ಬಂದಿರುವ  ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯವು ಎರಡುವರ್ಷದ ಬಿ.ಇಡಿ ತರಬೇತಿಯ ದ್ವಿತೀಯ ಬ್ಯಾಚ್ 2016-17ರ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ವಿಧ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು.
                                       
ಕಾರ್ಯಕ್ರಮವನ್ನು ಶ್ರೀ ಶ್ರೀ ಸದ್ಗುರು ಶಿವಲಿಂಗಾನಂದ ಮಹಾಸ್ವಾಮಿಗಳು, ಕಬೀರಾನಂದಾಶ್ರಮ ಇವರ ದಿವ್ಯಸಾನಿಧ್ಯದಲ್ಲಿ ನೆರವೇರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀ ಹೆಚ್. ರಾಮಮೂರ್ತಿ ವಲಯ ಅರಣ್ಯಾಧಿಕಾರಿಗಳು, ಜಗಳೂರು ಅವರು ವಹಿಸಿಕೊಂಡಿದ್ದರು.  ಮುಖ್ಯ ಅತಿಥಿಗಳಾಗಿ ಪ್ರೊ. ಕೆ.ಎನ್ ಗಂಗಾನಾಯಕ್ ದಾ.ವಿ.ವಿ ದಾವಣಗೆರೆ, ಇವರು ನೆರವೇರಿಸಿಕೊಟ್ಟರು. ಹಾಗೂ ಶ್ರೀ ಕೆ.ಎಂ. ವೀರೇಶ್ ಕಾರ್ಯದರ್ಶಿಗಳು ಬಾಪೂಜಿ ವಿದ್ಯಾಸಂಸ್ಥೆ, ಅಧ್ಯಕ್ಷರು ಶರಣಸಾಹಿತ್ಯ ಪರಿಷತ್ ಚಿತ್ರದುರ್ಗ, ಶ್ರೀಮತಿ ಕೆ. ಶಾರದಮ್ಮ ಕಾರ್ಯದರ್ಶಿಗಳು, ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ,ಚಿತ್ರದುರ್ಗ, ಶ್ರೀ ಜಿ.ಎಸ್. ವೆಂಕಟರೆಡ್ಡಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ದಾವಿ.ವಿ. ದಾವಣಗೆರೆ ಅಧ್ಯಕ್ಷರು, ಮಾನವಹಕ್ಕುಗಳ ಕಲ್ಯಾಣ ಮಂಡಳಿ(ರಿ) ಚಿತ್ರದುರ್ಗ, ಕಾರ್ಯಕ್ರಮದ ಮೇಲುಸ್ತುವಾರಿ ಪ್ರೋ ಎ.ಜಿ.ಬಸವರಾಜಪ್ಪ, ಪ್ರಾಂಶುಪಾಲರು ಶ್ರೀ.ರಾ.ಶಿ.ಮ. ಚಿತ್ರದುರ್ಗ ಇವರು ಆಯೋಜಿಸಿದ್ದರು,   ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. 2015-16 ನೇ ಸಾಲಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಮಾರಿ, ದೀಪಿಕಾ.ಎಂ.ಜೆ (518), ಕಲಾ ವಿಭಾಗ, ಕು.ರಂಜಿತ.ಟಿ (508) ವಿಜ್ಞಾನ ವಿಭಾಗ,ಕು. ರೂಪ ಟಿ.ಜೆ(507) ಇಂಗ್ಲೀಷ್ ವಿಭಾಗ ಇವರಿಗೆ ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮೀಜಿಗಳು ಪ್ರಶಸ್ತಿ, ಹಾಗೂ ಶಾಲು ಹೊದಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆವ್ಯಕ್ತಪಡಿಸಿದರು.